ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಮೇಲೆ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಮುಖವಾದ ದಾಖಲೆ ಎಂದರೆ ಅದು ರೇಷನ್ ಕಾರ್ಡ್ (Ration Card) ಈ ಒಂದು ರೇಷನ್ ಕಾರ್ಡ್ ದಾಖಲೆಯು ಪ್ರಮುಖವಾಗಿ (ಅನ್ನಭಾಗ್ಯ, ಗೃಹಲಕ್ಷ್ಮಿ) ಹಾಗೂ ಇನ್ನಿತರ ಯೋಜನೆಗಳಿಗೆ ಅತಿ ಮುಖ್ಯ ದಾಖಲೆಯಾಗಿದೆ. ಆದರೆ ಈಗ ನನ್ನ ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಒಂದು ಶಾಕಿಂಗ್ ಸುದ್ದಿ ನೀಡಿದೆ, ಅದೇನೆಂದರೆ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳು ತಮ್ಮ ಬಿಪಿಎಲ್ ಕಾರ್ಡ್ ಈ-ಕೆ ವೈ ಸಿ ಕಡ್ಡಾಯವಾಗಿ ಮಾಡಿಸಲೇಬೇಕು ಇಲ್ಲವಾದರೆ ಅಂತಹವರಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪಡಿತರವನ್ನು ವಿತರಣೆ ಮಾಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ.
ಆದ್ದರಿಂದ ನಮ್ಮ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ದಾರರು ರಾಜ್ಯ ಸರ್ಕಾರದ ಸೂಚನೆಯಂತೆ ಕಡ್ಡಾಯವಾಗಿ ತಮ್ಮ ಬಿಪಿಎಲ್ ಕಾರ್ಡ್ ಈ-ಕೆ ವೈ ಸಿ ಯನ್ನು ಮಾಡಿಸಲೇಬೇಕು. ಬಿಪಿಎಲ್ ಈ-ಕೆ ವೈ ಸಿ ಹೇಗೆ ಮಾಡುವುದು? ಮತ್ತು ಎಲ್ಲಿ ಮಾಡಿಸುವುದು? ಹಾಗೂ ಬಿಪಿಎಲ್ ಕೆವೈಸಿ ಮಾಡಿಸಲು ಕೊನೆ ದಿನಾಂಕ ಯಾವುದು? ಹಾಗೂ ಈ-ಕೆ ವೈ ಸಿ ಮಾಡಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು? ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಈ ಲೇಖನವನ್ನು ಓದಿರಿ.
ಬಿಪಿಎಲ್ ರೇಷನ್ ಕಾರ್ಡ್ ಈ-ಕೆ ವೈ ಸಿ: BPL ration card e-KYC
ಸ್ನೇಹಿತರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ ಸರ್ಕಾರವು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ಬಿಪಿಎಲ್ ಗಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿಗೆ ಕೆಜಿಗೆ 35 ರೂಪಾಯಿಯಂತೆ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಆದರೆ ಈಗ ಸರ್ಕಾರವು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಹೊಸ ಅಪ್ಡೇಟ್ ನೀಡಿದೆ. ಅದೇನೆಂದರೆ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಸಹ ತಮ್ಮ ರೇಷನ್ ಕಾರ್ಡ್ ಈ-ಕೆ ವೈಸಿ ಯನ್ನು ಕಡ್ಡಾಯವಾಗಿ ಅಕ್ಟೋಬರ್ 30ರ ಒಳಗಾಗಿ ಮಾಡಿಕೊಳ್ಳಬೇಕು. ಇಲ್ಲವಾದರೆ ಅಂತಹವರಿಗೆ ಪಡಿತರ ವಿತರಣೆ ಮಾಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ.
ಬಿಪಿಎಲ್ ರೇಷನ್ ಕಾರ್ಡ್ ಈ-ಕೆ ವೈ ಸಿ ಮಾಡಿಸಲು ಬೇಕಾಗುವ ದಾಖಲೆಗಳು?
- ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಕುಟುಂಬಸ್ಥರ ಆಧಾರ್ ಕಾರ್ಡ್ ಗಳು
- ರೇಷನ್ ಕಾರ್ಡ್
- ಕುಟುಂಬಸ್ಥರ ಬಯೋಮೆಟ್ರಿಕ್
- ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
BPL ರೇಷನ್ ಕಾರ್ಡ್ ಈ-ಕೆ ವೈಸಿ ಮಾಡಿಸಲು ಕೊನೆ ದಿನಾಂಕ:
ರಾಜ್ಯ ಸರ್ಕಾರವು ಈ ಹಿಂದೆಯೂ ಕೂಡ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಈ-ಕೆ ವೈ ಸಿ ಮಾಡಿಸಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಕೊನೆ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ರಾಜ್ಯದ ಎಲ್ಲಾ ಜನರ ಒತ್ತಾಯದ ಮೇರೆಗೆ ಮತ್ತೊಮ್ಮೆ ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸಹ ಅವಕಾಶ ಕಲ್ಪಿಸಿಕೊಟ್ಟಿದೆ. ಈಗ ರೇಷನ್ ಕಾರ್ಡ್ ಹೊಂದಿರುವವರು ಅಕ್ಟೋಬರ್ 30 ರ ಒಳಗಾಗಿ ತಮ್ಮ ರೇಷನ್ ಕಾರ್ಡ್ ಈಕೆ ವೈಸಿಯನ್ನು ಮಾಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ಎಲ್ಲಾರಿಗೂ ಸಹ ಎಚ್ಚರಿಕೆಯನ್ನು ನೀಡಿದೆ. ಹಾಗಾಗಿ ಕೂಡಲೇ ನೀವು ನಿಮ್ಮ ರೇಷನ್ ಕಾರ್ಡ್ ಈ-ಕೆ ವೈ ಸಿ ಬಯಸಿಯನ್ನು ಮಾಡಿಸಿಕೊಳ್ಳುವುದು ಉತ್ತಮ.
BPL ರೇಷನ್ ಕಾರ್ಡ್ ಈ-ಕೆ ವೈ ಸಿ ಮಾಡಿಸುವುದು ಹೇಗೆ?
ನೀವು ನಿಮ್ಮ ರೇಷನ್ ಕಾರ್ಡ್ ಈಗ ಮಾಡಿಸಲು ನೀವು ಪಡೆದ ಪಡೆಯುತ್ತಿರುವ ರೇಷನ್ ಅಂಗಡಿಯಲ್ಲೇ ನಿಮ್ಮ ರೇಷನ್ ಕಾರ್ಡ್ ಈ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳಬೇಕು. ಈ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳಲು ನೀವು ಮೊದಲು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಕುಟುಂಬಸ್ಥರೊಂದಿಗೆ ನೀವು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಗೆ ಹೋಗಿ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಈ-ಕೆ ವೈಸಿ ಮಾಡಿಸಿಕೊಳ್ಳಬೇಕು ಎಂದು ಅವರಿಗೆ ತಿಳಿಸುತ್ತಾರೆ. ಅವರು ನಿಮಗೆಲ್ಲಾ ದಾಖಲೆಗಳನ್ನು ನೋಡಿ ನಂತರ ನಿಮಗೆ ನಿಮ್ಮ ರೇಷನ್ ಕಾರ್ಡ್ ಈ ಕೆವೈಸಿಯನ್ನು ಸುಲಭವಾಗಿ ಮಾಡಿಕೊಡುತ್ತಾರೆ. ನೀವು ನಿಮ್ಮ ರೇಷನ್ ಕಾರ್ಡ್ ಗೆ ಅಕ್ಟೋಬರ್ 30ರ ಒಳಗಾಗಿ ಈ-ಕೆ ವೈಸಿ ಮಾಡಿಸಿಕೊಂಡರೆ ತುಂಬಾ ಉತ್ತಮ.