ನಮಸ್ಕಾರ ಸ್ನೇಹಿತರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ಈ ವರ್ಷದ (ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು) ಹಮ್ಮಿಕೊಂಡಿದೆ. ಈ ಒಂದು ವಿದ್ಯಾರ್ಥಿವೇತನವನ್ನು ನಮ್ಮ ದೇಶದ ಬಡ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಳ್ಳಲು ಈ ಸ್ಕಾಲರ್ಶಿಪ್ ಒಂದು ರೀತಿಯಲ್ಲಿ ಸಹಾಯಮಾಡುತ್ತದೆ ಹೀಗಾಗಿ ಈ ಒಂದು ಮಹತ್ಕಾರ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ಈ ಒಂದು ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿದ್ಯಾರ್ಥಿವೇತನಕ್ಕೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ಮಕ್ಕಳು ಈ ಒಂದು ವಿದ್ಯಾರ್ಥಿವೇತನಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಸ್ಕಾಲರ್ಶಿಪ್ ನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ.
SBIF ಆಶಾ ವಿದ್ಯಾರ್ಥಿವೇತನ ಶಾಲಾ ವಿದ್ಯಾರ್ಥಿಗಳಿಗೆ 2024:
ಸಂಸ್ಥೆಯ ಹೆಸರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ |
ಸ್ಕಾಲರ್ಶಿಪ್ ಹೆಸರು | SBIF ಆಶಾ ವಿದ್ಯಾರ್ಥಿವೇತನ ಶಾಲಾ ವಿದ್ಯಾರ್ಥಿಗಳಿಗೆ |
ಅರ್ಜಿ ಸಲ್ಲಿಸಲು ಅರ್ಹರು | 6ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳು |
ವಿದ್ಯಾರ್ಥಿವೇತನದ ಮೊತ್ತ | 15000 ರೂಪಾಯಿ |
ಅರ್ಜಿಯ ಕೊನೆ ದಿನಾಂಕ | 31/ಅಕ್ಟೋಬರ್/2024 |
ಈ ವಿದ್ಯಾರ್ಥಿವೇತನಕ್ಕೆ ಇರಬೇಕಾದ ಅರ್ಹತೆಗಳು:
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತ ದೇಶದ ನಿವಾಸಿಯಾಗಿರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರಸ್ತುತವಾಗಿ 6ನೇ ತರಗತಿಯಿಂದ 12ನೇ ತರಗತಿಯಲ್ಲಿ ಓದುತ್ತಿರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ತನ್ನ ಹಿಂದಿನ ತರಗತಿಯಲ್ಲಿ ಕನಿಷ್ಠ 75% ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣ ಆಗಿರಬೇಕು.
- ವಿದ್ಯಾರ್ಥಿಗಳು ಯಾವುದೇ ವರ್ಗದವರಾಗಿದ್ದರು ಸಹ ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
ಈ ಒಂದು ಎಸ್ ಬಿ ಐ ಫೌಂಡೇಶನ್ ನ ವಿದ್ಯಾರ್ಥಿವೇತನಕ್ಕೆ (SBIF Asha Scholarship Program Students) ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಗಳು ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು:
- ವಿದ್ಯಾರ್ಥಿ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ
- ಪ್ರಸ್ತುತವಾಗಿ ಓದುತ್ತಿರುವ ಸ್ಕೂಲ್ ಅಥವಾ ಕಾಲೇಜಿನ (ಸ್ಟಡಿ ಸರ್ಟಿಫಿಕೇಟ್)
- ಪ್ರಸ್ತುತ ವರ್ಷದ ಶುಲ್ಕದ ರಶೀದಿ (Free Receipt)
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ
- ಎಸ್.ಸಿ ಎಸ್.ಟಿ (SC/ST) ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ
- ವಿದ್ಯಾರ್ಥಿಗಳ ಭಾವಚಿತ್ರ
SBIF ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮೊದಲು Buddy4Studdy ಪೋರ್ಟಲ್ ಗೆ ಭೇಟಿ ನೀಡಿ, ನಂತರ ಈ ವೆಬ್ಸೈಟ್ನಲ್ಲಿ ನೀವು ನೋಂದಾಯಿಸಿಕೊಳ್ಳಬೇಕು.
- ನಂತರ ನೀವು ಲಾಗಿನ್ ಆಗುವ ಮುಖಾಂತರ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡುವ ಮೂಲಕ ಹಾಗೂ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವ ಮುಖಾಂತರ ಈ ಒಂದು ವಿದ್ಯಾರ್ಥಿವೇತನಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
ಪ್ರಮುಖ ಲಿಂಕ್ ಗಳು:
ಅರ್ಜಿಯ ಅಧಿಕೃತ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |