Railway Recruitment: ಪಶ್ಚಿಮ ರೈಲ್ವೆ ಇಲಾಖೆಯಲ್ಲಿ ಸುಮಾರು 5066 ಅಪ್ರೆಸೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೂಡಲೆ ಅರ್ಜಿ ಸಲ್ಲಿಸಿ!
ನಿಮ್ಮೆಲ್ಲರಿಗೂ ನಮಸ್ಕಾರ ಸ್ನೇಹಿತರೆ, ನೀವೇನಾದರೂ ಉದ್ಯೋಗ ಹುಡುಕುತ್ತಿದ್ದರೆ ನಿಮಗೊಂದು ಗುಡ್ ನ್ಯೂಸ್, ಏಕೆಂದರೆ ಪಶ್ಚಿಮ ರೈಲ್ವೆ ಇಲಾಖೆಯಲ್ಲಿ ಸುಮಾರು 5066 ತರಬೇತಿದಾರರ ಆಪರೇಷನ್ ಹುದ್ದೆಗಳಿಗೆ ಆಸಕ್ತಿಯುಳ್ಳ ಹಾಗೂ ಅರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವೇನಾದ್ರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸಿದರೆ ಇದು ನಿಮಗೆ ಸುವರ್ಣ ಅವಕಾಶವೆಂದು ಹೇಳಬಹುದು. ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳ ವಿವರ ಮತ್ತು ಕೊನೆ ದಿನಾಂಕದ ವಿವರ ಹಾಗೂ ಇನ್ನಿತರ ಎಲ್ಲಾ ವಿವರಗಳನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಸಂಪೂರ್ಣವಾಗಿ ಓದಿರಿ.
Table of Contents
Railway Recruitment: ಈ ಹುದ್ದೆಗಳ ಸಂಪೂರ್ಣ ವಿವರ
ಇಲಾಖೆಯ ಹೆಸರು | ಪಶ್ಚಿಮ ರೈಲ್ವೆ ಇಲಾಖೆ RRC |
ಹುದ್ದೆಯ ಹೆಸರು | ಅಪ್ರೆಸೆಂಟ್ ತರಬೇತಿದಾರರ ಹುದ್ದೆಗಳು |
ಹುದ್ದೆಗಳ ಸಂಖ್ಯೆ | 5066 |
ಸಂಬಳ | 8,000 ದಿಂದ 9,000 ರೂಪಾಯಿ |
ಉದ್ಯೋಗದ ಸ್ಥಳ | ಮುಂಬೈ ಹಾಗೂ ಮಹಾರಾಷ್ಟ್ರ |
ವಿದ್ಯಾರ್ಹತೆಯ ವಿವರ:
ಪಶ್ಚಿಮ ರೈಲು ಇಲಾಖೆಯಲ್ಲಿ ಖಾಲಿ ಇರುವ ಆಪರೇಷನ್ ತರಬೇತಿದಾರರ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಐಟಿಐ ಕೋರ್ಸ್ ಅನ್ನು ತೆಗೆದುಕೊಂಡು ಆ ಕೋರ್ಟ್ ನಲ್ಲಿ ಪಾಸಾಗಿರಬೇಕು. ಹಾಗೂ (ಏನ್.ಸಿ.ವಿ.ಟಿ) ಸರ್ಟಿಫಿಕೇಟ್ ಅನ್ನು ಸಹ ತಾವು ಕಡ್ಡಾಯವಾಗಿ ತೆಗೆದುಕೊಂಡಿರಬೇಕು ಎಂದು ತಿಳಿಸಲಾಗಿದೆ.
ವಯೋಮಿತಿಯ ವಿವರ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಆಸಕ್ತಿ ಇರುವ ಮತ್ತು ಅರ್ಹತೆ ಉಳ್ಳ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟಿರಬೇಕು ಹಾಗೂ 24 ವರ್ಷದ ಒಳಗಿನ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದೆಂದು ಅದಿಸೂಚನೆಯ ಪ್ರಕಾರ ತಿಳಿಸಲಾಗಿದೆ.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 100 ರೂಪಾಯಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.
ಆಯ್ಕೆಯ ಪ್ರಕ್ರಿಯೆ:
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಅವರು ತಮ್ಮ ಐಟಿಐ ನಲ್ಲಿ ಶೇಕಡ 50% ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳನ್ನು ಹಾಗೂ ಮೆಟ್ರಿಕ್ಯುಲೇಷನ್ 50% ಗಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಮೆರಿಟ್ ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ನೀವೇನಾದರೂ ರಾಜ್ಯ ಸಲ್ಲಿಸಲು ಬಯಸಿದರೆ ನೀವು ಮೊದಲು ನಾವು ಕೆಳಗಡೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಅಧಿಕೃತ ವೆಬ್ ಸೈಟಿಗೆ ತೆರಳುವ ಮುಖಾಂತರ ಅಲ್ಲಿಗೆ ಹುದ್ದೆಗಳ ಲಿಂಕನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ಕೇಳಲಾದ ಎಲ್ಲಾ ಅಧಿಕೃತ ದಾಖಲೆಗಳನ್ನು ಸಲ್ಲಿಸಿ ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ ನಂತರ ನೀವು ಈ ಒಂದು ಹುದ್ದೆಗಳಿಗೆ ತಮ್ಮ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು. ಈ ಹುದ್ದೆಗಳ ಅರ್ಜಿಯ ಅಧಿಕೃತ ಲಿಂಕನ್ನು ಕೆಳಗಡೆ ನೀಡಲಾಗಿದೆ.
ಅರ್ಜಿಯ ಸಲ್ಲಿಸಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |