Jio Deepawali Offer: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಹಾಗೂ ಈ ಒಂದು ಹಬ್ಬ ನಮ್ಮ ದೇಶದಲ್ಲಿ ಬೆಳಕಿನ ಸಂಕೇತದ ಹಬ್ಬ ಎಂದು ಹೇಳಬಹುದು. ಈ ಒಂದು ಹಬ್ಬದ ಪ್ರಯುಕ್ತ ಅನೇಕ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ ಹಲವಾರು ರೀತಿಯ ವಿಶೇಷ ಕೊಡುಗೆಗಳನ್ನು ನೀಡುತ್ತಿವೆ. ಹಾಗೆಯೇ ನಮ್ಮ ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ಕಂಪನಿಯೂ ಕೂಡ ತನ್ನ ಗ್ರಾಹಕರಿಗೆ ಹಲವಾರು ಬಗೆಯ ಆಫರ್ ಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ನೀಡುತ್ತಿದೆ. ಈ ಒಂದು ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿರುವ ವಿಶೇಷ ಆಫರ್ಗಳ ಕುರಿತು ಮತ್ತು ರಿಚಾರ್ಜ್ ಪ್ಲಾನ್ ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ ಪೂರ್ತಿಯಾಗಿ ಓದರಿ.
ಜಿಯೋ ದೀಪಾವಳಿ ರಿಚಾರ್ಜ್ ಆಫರ್:
ಜಿಯೋ ಕಂಪನಿಯು ತನ್ನ ಎಲ್ಲಾ ಗ್ರಾಹಕರಿಗೆ ಅತ್ಯುತ್ತಮವಾದ ರಿಚರ್ಡ್ ಆಫರ್ ಗಳನ್ನು ಘೋಷಿಸಿದೆ. ಈಗ ನಾವು ಹೇಳುವ ಹೊರಟಿರುವ ಜಿಯೋ ರಿಚಾರ್ಜ್ ಆಫರ್ ನಲ್ಲಿ ಗ್ರಾಹಕರು ಇಡೀ ವರ್ಷಕ್ಕೆ 5g ಇಂಟರ್ನೆಟನ್ನು ಉಚಿತವಾಗಿ ಪಡೆಯಬಹುದಾಗಿದೆ, ಇಷ್ಟೇ ಅಲ್ಲದೆ ಗ್ರಾಹಕರು ಇನ್ನು ಹಲವಾರು ರೀತಿಯ ಆಫರ್ ಗಳನ್ನು ಪಡೆಯಬಹುದು ಅದರಲ್ಲಿ ಗ್ರಾಹಕರು ಪ್ರತಿದಿನ 2.5 ಜಿಬಿ ಡಾಟಾವನ್ನು ಸಹ ಪಡೆದುಕೊಳ್ಳಬಹುದು. ಈ ಒಂದು ಆಫರ್ ಕೇವಲ ಹೊಸ ಗ್ರಾಹಕರಿಗೆ ಮಾತ್ರವಲ್ಲ ಈ ಒಂದು ಆಫರನ್ನು ಜಿಯೋ ಸಿಮ್ ಬಳಸುವ ಹಳೆ ಗ್ರಾಹಕರು ಕೂಡ ಪಡೆದುಕೊಳ್ಳಬಹುದು. ಹಳೆ ಮತ್ತು ಹೊಸ ಗ್ರಾಹಕರು ಯಾವೆಲ್ಲ ಆಫರ್ ಗಳನ್ನು ಪಡೆದುಕೊಳ್ಳಬಹುದು ಇದರ ವಿವರ ಕೆಳಗಿದೆ.
- ಒಂದು ವರ್ಷದವರೆಗಿನ ಉಚಿತ 5G ಹೈಸ್ಪೀಡ್ ಇಂಟರ್ನೆಟನ್ನು ಪಡೆದುಕೊಳ್ಳಬಹುದು.
- ಗ್ರಾಹಕರು ಪ್ರತಿದಿನ 2.5 GB ಹೈಸ್ಪೀಡ್ ಡಾಟಾವನ್ನು ಸಹ ಪಡೆದುಕೊಳ್ಳಬಹುದು.
- ಈ ಆಫರ್ ಗಳನ್ನು ಹಳೆಯ ಮತ್ತು ಹೊಸ ಗ್ರಾಹಕರು ಪಡೆದುಕೊಳ್ಳಬಹುದು.
- ಈ ಆಫರ್ ಗಳು ಜಿಯೋ (Jio) ಮತ್ತು ಜಿಯೋ ಫೈಬರ್ (Jio Fiber) ನಲ್ಲಿಯೂ ಸಹ ಅನ್ವಯಿಸುತ್ತದೆ.
ಈ ಆಫರ್ ಅವಧಿಯ ಮಿತಿ:
ಜಿಯೋ ಕಂಪನಿಯ ಈ ವಿಶೇಷ ಆಫರ್ ಗಳು ಸೆಪ್ಟೆಂಬರ್ ತಿಂಗಳ 18ನೇ ತಾರೀಕಿನಿಂದ ಹಿಡಿದು ನವೆಂಬರ್ ತಿಂಗಳ ಮೂರನೇ ತಾರೀಕಿನ ತನಕ ಚಾಲ್ತಿಯಲ್ಲಿ ಇರುತ್ತದೆ. ಅಂದರೆ ಈ ಒಂದು ಆಫರನ್ನು ಪಡೆದುಕೊಳ್ಳಲು ಕಂಪನಿಯು ಗ್ರಾಹಕರಿಗೆ ಸುಮಾರು ಒಂದುವರೆ ತಿಂಗಳ ಸುಧೀರ್ಘ ಕಾಲಾವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಒಂದು ವಿಶೇಷ ಆಫರ್ಗಳ ಸದುಪಯೋಗವನ್ನು ಜಿಯೋ ಸಿಮ್ ಬಳಸುವ ಎಲ್ಲಾ ಗ್ರಾಹಕರು ಪಡೆದುಕೊಳ್ಳಬಹುದು.
Jio Deepawali Offer: ಈ ವಿಶೇಷ ಆಫರ್ ಗಳ ಲಾಭವನ್ನು ಹೇಗೆ ಪಡೆದುಕೊಳ್ಳುವುದು:
ಹೊಸ ಗ್ರಾಹಕರಿಗೆ:
- ಹೊಸ ಗ್ರಾಹಕರು ಸುಮಾರು 20,000 ರೂಪಾಯಿಗಳ ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಯನ್ನು ರಿಲಯನ್ಸ್ ಡಿಜಿಟಲ್ ನಲ್ಲಿ ಅಥವಾ ಮೈ ಜಿಯೋ ಸ್ಟೋರ್ ನಲ್ಲಿ ಮಾಡಿರಬೇಕಾಗುತ್ತದೆ.
- ಈ ಒಂದು ಖರೀದಿಯು ಟಿವಿ ಎಸಿ ಅಥವಾ ಇನ್ನಿತರ ಅಪ್ಲೈನ್ಸಸ್ ಗಳ ಹಾಗೂ ಎಲೆಕ್ಟ್ರಿಕ್ ಉಪಕರಣಗಳನ್ನು ಸಹ ಒಳಗೊಂಡಿದೆ.
ಹಳೆ ಗ್ರಾಹಕರಿಗೆ:
ಹಳೆ ಗ್ರಾಹಕರು ಯಾರೆಲ್ಲ Air Fiber ಅನ್ನು ಬಳಕೆ ಮಾಡುತ್ತಿದ್ದರು ಅಂತವರು 2,222 ರುಪಾಯಿಯ ಮೂರು ತಿಂಗಳ ದೀಪಾವಳಿ ಆಫರ್ ನೊಂದಿಗೆ ರಿಚಾರ್ಜ್ ಮಾಡಿಕೊಳ್ಳುವ ಮುಖಾಂತರ ಈ ಒಂದು ವಿಶೇಷ ಆಫರನ್ನು ಪಡೆದುಕೊಳ್ಳಬಹುದು.
ಜಿಯೋ ಕಂಪನಿಯ ಈ ಒಂದು ವಿಶೇಷ ಆಫರ್ ಇರುವ ಕೊಡುಗೆಯು ಗ್ರಾಹಕರಿಗೆ ಸಾಕಷ್ಟು ಲಾಭವನ್ನು ಕೊಡುವುದರಲ್ಲಿ ಎರಡು ಮಾತಿಲ್ಲ. ಹಾಗೂ ಈ ವಿಶೇಷ ಆಫರ್ ಯೋಜನೆಯು ಜಿಯೋ ಕಂಪನಿಯ ಒಂದು ಅತ್ಯುತ್ತಮ ಮಾರ್ಕೆಟಿಂಗ್ ತಂತ್ರವಾಗಿದೆ ಎಂದು ಹೇಳಬಹುದು ಹಾಗೂ ಇದು ಜಿಯೋ ಡಿಜಿಟಲ್ ಇಂಡಿಯಾ ಕನಸನ್ನು ಸಹ ನನಸು ಮಾಡುವ ಒಂದು ಒಳ್ಳೆಯ ಯೋಜನೆಯಾಗಿದೆ. ಗ್ರಾಹಕರು ಅತಿ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿಕೊಳ್ಳಲು ಬಯಸಿದರೆ ಇದೊಂದು ಒಳ್ಳೆಯ ಸಮಯವೆಂದು ಹೇಳಬಹುದು.