Gruhalakshmi Amount Credit : ಗೃಹಲಕ್ಷ್ಮಿ ಯೋಜನೆ 12ನೇ ಕಂತಿನ ಹಣವು ಜಮಾ! ನಿಮ್ಮ ಖಾತೆಗೆ ಜಮಾ ಆಗಿದೆಯೇ ಚೆಕ್ ಮಾಡಿಕೊಳ್ಳಿ.
ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದು ಒಂದು ಗುಡ್ ನ್ಯೂಸ್ ? 12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಜಮಾ ಆಗಿದೆ ಎಂಬುದನ್ನು ನೀವು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ವಿವರ
ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ 11 ಕಂತಿನ ಹಣವು ಅಂದರೆ 22 ಸಾವಿರ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಸರ್ಕಾರವು ಈಗ ಜಮಾ ಮಾಡಿದೆ. ಅದೇ ರೀತಿಯಾಗಿ ಇಂದು 12 ನೇ ಕಂತಿನ ಜುಲೈ ತಿಂಗಳ 2000 ಹಣ ನಿಮ್ಮ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು ನೀವು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ .
ಗೃಹಲಕ್ಷ್ಮಿ ಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ?
ಸ್ನೇಹಿತರೆ ಈಗ ನಿಮಗೆ ಏನಾದರೂ ಗೃಹಲಕ್ಷ್ಮಿ ಯೋಜನೆ 2000 ಹಣವು ನಿಮ್ಮ ಖಾತೆಗಳಿಗೆ ಜಮಾ ಆಗಿದೆ ಇಲ್ಲವೆ ಎಂಬುದನ್ನು ನೀವು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ನಿಮಗೆ ಈ ಕೆಳಗೆ ತಿಳಿಸಿರುವ ಪ್ರಕಾರ ನೀವು DBT ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
- ಈಗ ಮೊದಲಿಗೆ ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ APP ಅನ್ನು ನೀವು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- Link : DBT APP
- ಆನಂತರ ನೀವು ನಿಮ್ಮ ಮೊಬೈಲ್ ನಲ್ಲಿ ಆ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನೀವು ಅಲ್ಲಿ ಎಂಟರ್ ಮಾಡಿ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ. ನೀವು ಆ ಒಟಿಪಿ ಅನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಮೊಬೈಲ್ ಗೆ ಬಂದಿರುವಂತ ಓಟಿಪಿ ಅನ್ನು ಖಾಲಿ ಇರುವ ಜಾಗದಲ್ಲಿ ಎಂಟರ್ ಮಾಡಿ. ವೇರಿಫೈ ಬಟನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ವೈಯಕ್ತಿಕ ವಿವರ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ಅಲ್ಲಿ ಎಂಟರ್ ಮಾಡಲು ಕೇಳುತ್ತದೆ. ನೀವು ಅದನ್ನು ಎಂಟರ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇರುವಂತಹ ಮೊಬೈಲ್ ನಂಬರ್ ಅನ್ನು ಅಲ್ಲಿ ನಮೂದಿಸಿ ಓಕೆ ಬಟನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವಂತ ನಾಲ್ಕು ಅಂಕೆಯ ಒಂದು MPIN ನನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಮತ್ತೊಮ್ಮೆ ಆ ಒಂದು MPIN ನನ್ನು ಎಂಟರ್ ಮಾಡುವುದರ ಮೂಲಕ ಮತ್ತೆ ಲಾಗಿನ್ ಆಗಬೇಕಾಗುತ್ತದೆ.
- ತದನಂತರ ಅದರಲ್ಲಿ ನಿಮಗೆ ಸೆಲೆಕ್ಟ್ ಬೆನಿಫಿಷಿಯರಿ ಎಂದು ಕಾಣುತ್ತದೆ, ನೀವು ಅದರಲ್ಲಿ ADD ಮಾಡಿರುವಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ನೀವು ಮತ್ತೆ MPIN ನನ್ನು ಎಂಟರ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನಿಮಗೆ ಅಲ್ಲಿ ಗೃಹಲಕ್ಷ್ಮಿ DBT ಸ್ಟೇಟಸ್ ಎಂಬ ಆಯ್ಕೆಯು ಕಾಣುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೇ ಎಂಬುದರ ಸಂಪೂರ್ಣ ಮಾಹಿತಿ ಹಾಗೂ ಯಾವ ದಿನಾಂಕದಂದು ನಿಮಗೆ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಮಾಹಿತಿ ದೊರೆಯುತ್ತದೆ.
ಇದನ್ನು ಓದಿ : Panchayata Requerment : ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ಗೃಹಲಕ್ಷ್ಮಿ ಯೋಜನೆ ಹಣವನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಡಬೇಕೆಂಬುದರ ಬಗ್ಗೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.