Anna Bhagya Update: ಎಲ್ಲರಿಗೂ ನಮಸ್ಕಾರ ಈ ದಿನದ ಲೇಖನದಲ್ಲಿ ನಿಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ರಾಜ್ಯ ಸರ್ಕಾರವು ಪಂಚ ಯೋಜನೆಗಳನ್ನು ಜಾರಿಗೆ ತಂದು ಇಂದಿಗೆ ಒಂದು ವರ್ಷ ನಾಲ್ಕು ತಿಂಗಳು ಪೂರ್ಣವಾಗಿವೆ. ಈ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಬಹು ಮುಖ್ಯ ಯೋಜನೆ ಎಂದರೆ ಅದು ಅನ್ನ ಭಾಗ್ಯ ಯೋಜನೆ ಇದುವರೆಗೆ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳು ಅನ್ನ ಭಾಗ್ಯ ಯೋಜನೆಯಿಂದ 5 ಕೆಜಿ ಅಕ್ಕಿ ಮತ್ತು ಇನ್ನು ಐದು ಕೆಜಿ ಅಕ್ಕಿಯ ಹಣವನ್ನು ಪಡೆಯುತ್ತಾ ಬಂದಿದ್ದಾರೆ. ಇದೀಗ ಈ ಒಂದು ಅಕ್ಕಿ ಯೋಜನೆ ಹಣವನ್ನು ರಾಜ್ಯದ ಜನತೆ ಪಡೆದುಕೊಳ್ಳಬೇಕಾದರೆ ರಾಜ ಸರ್ಕಾರವು ಒಂದು ಹೊಸ ರೂಲ್ಸ್ ಜಾರಿ ಮಾಡಿದೆ ಈ ಒಂದು ರೂಲ್ಸ್ ಬಗ್ಗೆ ನಿಮ್ಮೆಲ್ಲರಿಗೂ ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಪೂರ್ತಿಯಾಗಿ ಓದಿರಿ.
Anna Bhagya Update: ಅಕ್ಕಿ ಹಣ ಪಡೆಯಲು ಹೊಸ ರೂಲ್ಸ್ ಜಾರಿ!
ನಿಮ್ಮೆಲ್ಲರಿಗೂ ಸಹ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ಚುನಾವಣೆಯ ಪೂರ್ವದಲ್ಲಿ 10 ಕೆಜಿ ಅಕ್ಕಿಯನ್ನು ರೇಷನ್ ಕಾರ್ಡ್ ಹೊಂದಿರುವ ಪ್ರತಿ ಮನೆಯ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಘೋಷಿಸಿತ್ತು, ಆದರೆ ಕಾರಣಾಂತರಗಳಿಂದ ರಾಜ ಸರ್ಕಾರವು ಕೇವಲ 5 ಕೆಜಿ ಅಕ್ಕಿಯನ್ನು ಪ್ರತಿ ಫಲಾನುಭವಿಗಳಿಗೆ ನೀಡುತ್ತಾ ಬಂದಿದೆ ಹಾಗೆ ಇನ್ನುಳಿದ 5 ಕೆಜಿ ಅಕ್ಕಿಯ ಹಣವನ್ನು ಕೇಜಿಗೆ 35 ರೂಪಾಯಿಗಳಂತೆ ಪ್ರತಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರದ ಮುಂದೆ ಅನ್ನಭಾಗ್ಯ ಪೆಂಡಿಂಗ್ ಹಣವನ್ನು ಜಮಾ ಮಾಡುವ ಜವಾಬ್ದಾರಿ ಇದೆ. ಈ ತಿಂಗಳು ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣವನ್ನು ಜಮಾ ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.
ನಮಗೆ ತಿಳಿದುಬಂದ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವು ಆಗಸ್ಟ್ ತಿಂಗಳ ಹಾಗೂ ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣವನ್ನು ಇದೇ ತಿಂಗಳು ಅಂದರೆ ಅಕ್ಟೋಬರ್ ತಿಂಗಳ 20ನೇ ತಾರೀಕಿನ ಒಳಗೆ ಜಮಾ ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಈ ವಿಚಾರವನ್ನು ಆಹಾರ ಸಚಿವರಾದ ಶ್ರೀ ಕೆಎಚ್ ಮುನಿಯಪ್ಪನವರು ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಸಚಿವರು ತಿಳಿಸಿದಂತೆ ರಾಜ್ಯದ ಜನತೆ ನನ್ನ ಭಾಗ್ಯ ಯೋಜನೆ ಪೆಂಡಿಂಗ್ ಹಣದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಪೆಂಡಿಂಗ್ ಹಣ ಆದಷ್ಟು ಬೇಗ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗುವುದು ಖಚಿತ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಪೆಂಡಿಂಗ್ ಕಂತುಗಳ ಹಣ ಬಾರದವರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು!
- ಹಣ ಬಾರದವರು ಮೊದಲು ನಿಮ್ಮ ರೇಷನ್ ಕಾರ್ಡ್ ಈ ಕೆ ವೈ ಸಿ (E-KYC) ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
- ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ. ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು.
- ಹಣ ಬಾರದವರು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿರಬೇಕು.
- ನೀವು ವರ್ಷದಲ್ಲಿ 8 ರಿಂದ 10 ತಿಂಗಳ ರೇಷನ್ ಅಂದರೆ ಪಡಿತರವನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು.
ಮೇಲಿನ ಎಲ್ಲ ಕೆಲಸಗಳನ್ನು ನೀವು ಮಾಡಿಕೊಂಡಿದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಮತ್ತು ಇತರ ಯೋಜನೆಯ ಹಣವು ಕೂಡ ಜಮಾ ಆಗುತ್ತದೆ.